Tuesday, July 2, 2019

Saroja Krishnamurthy, Community Administrator, Bangalore, Karnataka, India

ಮುಕ್ತಾಯ
ನಿಶೆ ಹರಿಯಿತು
ಕನಸುಗಳು ಕಣ್ಮರೆಯಾದವು
ಮೋಡ ಕವಿದ ಆಕಾಶ
ತನ್ನ ಬಾಗಿಲುಗಳ ಮುಚ್ಚುವಂತಿದೆ
ಅಣಕಿಸುವ ತಾರಾಕೂಟ
ಕಣ್ಣು ಮುಚ್ಚಿದವು

ಸುಟ್ಟು ಭಸ್ಮವಾಯಿತು ಗರ್ವ
ಎಂತದೋ ಹಂಬಲ ಕಿವಿಗಳಿಗೆ
ಪ್ರೀತಿಯ ನುಡಿಯ ಆಲಿಸಲು
ಗಟ್ಟಿಯಾಗಿ ಬಳಸಿ
ಯಾರನ್ನಾದರೂ ತಬ್ಬುವ ಬಯಕೆ
ಗಾಯನ, ನರ್ತನಗಳ ಸದ್ದಡಗಿದವು
ರವಿಯ ಬೆಳಕ ಕಾಣುವಾಸೆ
ಇನ್ನೂ ಕೊಂಚ ಮಿಡಿಯುತ್ತಿರುವ
ಹೃದಯಕ್ಕೆ
ಆದರೆ ಅದೇನೋ ಒಂದು
ಸೆಳೆದೊಯ್ಯುತಿದೆ
ಅವನ ವಿಶ್ವವನ್ನು ದೋಚಿ
© ೨೦೧೯ ಬಿ.ಎಸ್.ಸರೋಜ
೦೧/೦೭/೨೦೧೯
ಚಿತ್ರದ ಮೇಲೆ ಯಾವುದೇ ಹಕ್ಕಿಲ್ಲ

ENGLISH VERSION
Closure
Night has ended
Dreams have escaped
Clouded sky
As though closing shutters
Mocking stars
Eyes shut
Pride burnt into ashes
Ears yearning to hear
The loving whispers
Trying to clasp someone
In his arms
Song and dance stopped
Heart longing
for a sunny day
But
Something
is sweeping him away
Robbing his world
© 2019 B.S.Saroja




No comments:

Post a Comment

Zenaida Laragan Taloza, Piano di Sorrento, Italy

Tomorrow Tomorrow shall be a beautiful day.. Differs from the day that just past away.. It feels the soul strongly to get up fairly.. Tom...